ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಸ್ಯಾಂಡಲ್ ವುಡ್ ನ ರಾಜಕುಮಾರ. ಪೌರಾಣಿಕ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂದು ಇತ್ತಿಚಿಗಷ್ಟೇ ತಮ್ಮ ಆಶಯವನ್ನ ವ್ಯಕ್ತ ಪಡಿಸಿದ ಪುನೀತ್ ಅವರ ಆಸೆ ನಿಜವಾಗಿದೆ.
ಪುನೀತ್ ರಾಜ್ ಕುಮಾರ್ ರಾಜನ ಗೆಟಪ್ ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಆದರೆ ಅಪ್ಪು ರಾಜಕುಮಾರನಾಗಿ ತೆರೆ ಮೇಲೆ ಕಾಣಿಸಿಕೊಳ್ಳುವುದು ಸಿನಿಮಾದಲ್ಲಿ ಅಲ್ಲ. ಖಾಸಗಿ ಕಂಪನಿಯ ಆಭರಣದ ಜಾಹೀರಾತಿನಲ್ಲಿ ಪುನೀತ್ ರಾಜನ ವೇಷ ಹಾಕಿ ಅಭಿನಯಿಸಿದ್ದಾರೆ.
ವಿಶೇಷ ಅಂದರೆ ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ನಟಿ ತಮನ್ನಾ ಕೂಡ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದ ನಟರಾದ ಸಾಧುಕೋಕಿಲ ಹಾಗೂ ಅವಿನಾಶ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.'ರಣವಿಕ್ರಮ' ಸಿನಿಮಾದ ಹಾಡೊಂದರಲ್ಲಿ ಅಪ್ಪು ಪೌರಾಣಿಕ ಪಾತ್ರದ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಪುನೀತ್ ಹೊಸ ಗೆಟಪ್ ನೋಡಿ ಮೆಚ್ಚಿಕೊಂಡಿದ್ದರು.
kannada Actor Puneet Rajkumar and actress Tamanna have appeared in jewelery advertisement. The two have acted together for the first time.